ಕೈಯೋಟ್ ಸಿಡಿತ

ಸುರಂಗ ಸಿಡಿತ ಪದ್ಧತಿಯ ಹೆಸರು. ಗುಡ್ಡಗಾಡು ಪ್ರದೇಶದಲ್ಲಿ ಸಿಡಿತ ರಂಧ್ರಗಳನ್ನು ಭೂ ಮೇಲ್ಮೈಯಿಂದ ಕೊರೆಯಲು ಅಸಾಧ್ಯವಾದಾಗ ಈ ಪದ್ಧತಿಯನ್ನು ಅನುಸರಿಸುತ್ತಾರೆ. ಗುಡ್ಡದ ಒಂದು ಪಾಶ್ರ್ವದಿಂದ ಕೈಯೋಟ್ ರಂಧ್ರಗಳನ್ನು ತೋಡಿ ಸಿಡಿತದ ಕೋಣೆಗೆ ಸೇರಿಸಲಾಗುತ್ತದೆ. ನಿಯೋಜಿತ ಸಿಡಿತದ ಕೋಣೆಯಲ್ಲಿ ಬಂದೂಕು ಸಿಡಿಮದ್ದನ್ನು ಡಬ್ಬಿಗಳಲ್ಲಿ ತುಂಬಿ ಮುಚ್ಚಿ ಇಡುತ್ತಾರೆ. ಸಣ್ಣ ಸಿಡಿಮದ್ದು ತೋಟಾಗಳನ್ನು ಸಹ ಇದೇ ರೀತಿ ಇಡುತ್ತಾರೆ. ಇವುಗಳ ಮಧ್ಯೆ ದೊಡ್ಡ ಮೊತ್ತದಲ್ಲಿ ಸಿಡಿಮದ್ದು ತೋಟಾಗಳನ್ನು ಅಲ್ಲಲ್ಲಿ ಚೆಲ್ಲಿರುತ್ತಾರೆ. ಅನಂತರ ಸ್ಫೋಟಕವನ್ನು ಒಳಗೊಂಡ ಎರಡು ತೋಟಾಗಳನ್ನು ಸಿಡಿಮದ್ದಿನ ರಾಶಿಯಲ್ಲಿಟ್ಟು ಪ್ರವೇಶ ಸುರಂಗವನ್ನು ಭದ್ರವಾಗಿ ಪ್ರತಿಬಂಧಿಸುತ್ತಾರೆ. ಈ ಪದ್ಧತಿಯನ್ನು ಅನುಸರಿಸುವಾಗ ಸ್ಫೋಟಕದ ವಿದ್ಯುತ್ ತಂತಿಯನ್ನು ಬಹು ಜಾಗರೂಕತೆಯಿಂದ ರಕ್ಷಿಸಬೇಕು. ಕೆಲವು ವೇಳೆ ಎರಡು ಬೇರೆ ಬೇರೆ ವಿದ್ಯುತ್ ಪ್ರವಾಹ ಮಾರ್ಗಗಳನ್ನು ಏರ್ಪಡಿಸುವುದುಂಟು. ಇದರಿಂದ ಅತಿ ಎತ್ತರವಾದ ಪಾಶ್ರ್ವಗಳನ್ನು ಸಿಡಿಸಬಹುದು.	  (ಟಿ. ಟಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ